Sunday, February 7, 2010

Havyaka Cuisine.

ನೀರ್ ಮಾವಿನಕಾಯಿ ಪಲ್ಯ.Preserved Mango Palya.

ಬೇಕಾದ ವಸ್ತು:೧:ಉಪ್ಪಿನಲ್ಲಿ ಹಾಕಿದ ಸಣ್ಣಗೆ ಹೆಚ್ಚಿದ ಮಾವಿನ ಕಾಯಿ ಹೋಳು-೧ ಕಪ್.(ಎರಡು ಸಣ್ಣ ಮಾವು)
೨:೨ ಚಮಚ ಕೊತ್ತಂಬರಿ,೧ ಚಮಚ ಉದ್ದಿನ ಬೇಳೆ,೧ ಚಮಚ ಜೀರಿಗೆ,೨ ಒಣ ಮೆಣಸು,೫ ಟೇಬಲ್ ಸ್ಪೂನ್ ತುರಿದ ತೆಂಗಿನ ಕಾಯಿ.
ವಿಧಾನ:ಮಾವಿನ ಹೋಳನ್ನು ನೀರಲ್ಲಿ ಚೆನ್ನಾಗಿ ನೆನಸಿಟ್ಟು ಸರಿಯಾಗಿ ನೀರನ್ನು ಹಿಂಡಿ ತೆಗೆದು ಹೋಳು ಮುಳುಗುವಷ್ಟು ನೀರಿನಲ್ಲಿ ಮೆತ್ತಗಾಗುವ ವರೆಗೆ ಬೇಯಿಸಿ ಇಟ್ಟುಕೊಳ್ಳಿ.ಬೇಯುತ್ತಿರುವಾಗ ಅಗತ್ಯವಿದ್ದಷ್ಟು ನೀರು ಸೇರಿಸಬಹುದು.
ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು (ತೆಂಗಿನ ತುರಿ ಹೊರತು)ತೆಂಗಿನ ಎಣ್ಣೆಯಲ್ಲಿ ಹುರಿದು ತೆಂಗಿನ ತುರಿ ಸೇರಿಸಿ ರುಬ್ಬಿಕೊಳ್ಳಿ.
ಒಂದು ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ನೀರಿನಲ್ಲಿ ಬೇಯಿಸಿದ ಹೋಳನ್ನು ಬಿಸಿ ಮಾಡಿ ಬೀಸಿದ ಮಸಾಲೆ ಹಾಕಿ ೫ ನಿಮಿಷ ಅಥವಾ ನೀರು ಆರಿ ಪಲ್ಯದ ಹದಕ್ಕೆ ಬಂದಾಗ ಇಳಿಸಿಕೊಳ್ಳಿ.ಇಷ್ಟ ಇದ್ದವರು ಬೆಳ್ಳುಳ್ಳಿ ಒಗ್ಗರಣೆ ಕೊಡಬಹುದು.
ಅನ್ನದ ಜೊತೆ (ಕುಚ್ಚಲನ್ನ) ಬಡಿಸಿ.(ಇದಕ್ಕೆ ಉಪ್ಪು ಹಾಕುವ ಅಗತ್ಯವಿಲ್ಲ)

1 comment: