Wednesday, October 6, 2010

Think

ಕೃಷ್ಣ ಭಾವ ಒಳ್ಳೆ ಪ್ರಶ್ನೆ ಕೇಳಿದ°.ಹಿಂದಾಣ ಕಾಲದವು ಬೈಪ್ಪಣೆ ಇಲ್ಲದ್ದೆ ಉಂಡುಗೊಂದಿತ್ತಿದ್ದವು, ಮುದುಕರಪ್ಪಲಿಯವರೆಗೂ ಕೆಲಸ ಮಾಡಿಗೊಂಡಿತ್ತಿದ್ದವು,ಹಾಂಗಾಗಿ ಹಿಂದಣ ಕ್ರಮವೇ ಒಳ್ಳೆದಲ್ಲದೊ.
ಅವ° ಹೇಳುದು ಸ್ವಲ್ಪ ಮಟ್ಟಿಂಗೆ ಸರಿಯೇ.
ಆನೀಗ ಕ್ರಮಂಗಳ ಬಗ್ಗೆ ಬರೆತ್ತಿಲ್ಲೆ.ಏಂತಕೆ ಹೇಳಿರೆ ನಾವೀಗ ಕ್ರಮ ಬದಲಾವಣೆ ಮಾದುವ ಪರಿಸ್ತಿತಿಲಿ ಇಲ್ಲೆ,ಹೊಸ ಕ್ರಮ ಹೊಸ ಕೆಲಸ ಹೊಸ ಜೀವನಕ್ಕೆ ಒಗ್ಗಿ ಹೋಗಿಯೊಂಡಾಯಿದು.
ಹಿಂದಾಣೋರು ಶಾರೀರಿಕವಾಗಿ ನಾವಿಪ್ಪದಕ್ಕಿಂತ ಗಟ್ಟಿಯಾಗಿತ್ತಿದ್ದವಾ.ಅಪ್ಪು.
ನಮ್ಮ ಅಜ್ಜಂದ್ರ ಕಾಲಲ್ಲಿ ಆಧುನಿಕ ವೈದ್ಯಕೀಯ ಶಾಸ್ತ್ರ ಇನ್ನೂ ಚಾಲ್ತಿಗೆ ಬಂದಿತ್ತಿಲ್ಲೆ.ಯಾವದೇ ರೀತಿಯ ಜನಸಂಖ್ಯೆ ನಿಯಂತ್ರಣ ಚಾಲ್ತಿಲಿ ಇತ್ತಿಲ್ಲೆ ಅದಾ.ಅಂಬಗ ಒಂದು ದಂಪತಿಗೆ ಒಂದು ಮಗುವಿಂದ ಹಿಡುದು ಹದ್ನೆಂಟು ಮಕ್ಕೊ ಹುಟ್ಟಿದ್ದೂ ಇಕ್ಕು.ಆದರೆ ಹೆಚ್ಚಿನ ಉದಾಹರೆಣೆಗಳಲ್ಲಿ ನಾಲ್ಕೋ ಐದೋ ಮಕ್ಕೊ ಒಳುದಿಕ್ಕು.ಹೆಚ್ಚು ಒಳುದ್ದದು ಸ್ವಾಭಾವಿಕವಾಗಿ ಗಟ್ಟಿಯಗಿದ್ದ ಕಾರಣ.
ನಾವು ಪ್ರಕೃತಿಲಿ ನೋಡುತ್ತು.ಸೌತ್ತೆ ಬಿತ್ತು ಹಾಕಿರೆ ಅದು ರಜಾ ದೊಡ್ಡಪ್ಪಾಗ ಎಡೇಂದ ಸೆಸಿ ಕಿತ್ತು ಹಾಕಿ ಒಳ್ಳೆದಿಪ್ಪ ಸೆಸಿ ಮಾಂತ್ರ ಮಡಿಕ್ಕೊಂಬದರ ನಮ್ಮ ಮನೆಗಳಲ್ಲಿ ನೋಡಿದ್ದು.ಹಾಂಗೇ ಹುಟ್ಟಿದ ಮಕ್ಕಳಲ್ಲಿ ಯಾವದೇ ರೀತಿಯ ಅನಾರೋಗ್ಯ ಇದ್ದಲ್ಲಿ ಅಥವಾ ಮುಂದೆ ಆರೋಗ್ಯಲ್ಲಿ ಇಪ್ಪಲೆ ಸಾಧ್ಯ ಇಲ್ಲೆ ಹೇಳಿ ಇದ್ದ ಮಕ್ಕೊ ಹುಟ್ಟಿದ ಕೆಲವೇ ದಿನಲ್ಲಿ ಅಥವಾ ವರ್ಷಲ್ಲಿ ಸತ್ತುಗೊಂಡಿತ್ತಿದ್ದವು.ನಮ್ಮ ದೇಶಲ್ಲಿ ೧೯೩೦ನೇ ಇಸವಿಲಿ ೧೦೦೦ ಮಕ್ಕಳಲ್ಲಿ ೨೩೦ ಮಕ್ಕ ಒಂದು ವರ್ಷ ಆಯೆಕ್ಕಾರೆ ಹೀಂಗೆ ಸತ್ತೊಂಡಿತ್ತಿದ್ದವು.(ಇಂದು ಅದು ೩೦ರ ಹಿಂದೆ ಮುಂದೆ ಇದ್ದು).ಒಳುದವೂ ಕೂಡಾ ಬೇರೆ ಬೇರೆ ಕಾಯಿಲೆಲಿ ಒಳುಕ್ಕೊಂಡಿತ್ತಿದವಿಲ್ಲೆ.ನವಗೆ ನೆಂಪಿಕ್ಕು,ಅವನ ಹೆಂಡತ್ತಿ ಬಸರಿ ಕೂಸು ಹೆರಿಗೆಲಿ ಹೋತಾಡ,ಅವನ ಅಳಿಯ ಸನ್ನಿಲಿ ಹೋದಾಡ ಹೇಳಿ ಮಾತಾಡಿಯೊಂಡಿದ್ದದು.ಎರಡನೇ ಮದುವೆ ಬಾರೀ ಸಾಮಾನ್ಯ ಆಗಿತ್ತು.ಸಣ್ಣ ಪ್ರಾಯದ ವಿಧವೆ,ಹೆಂಡತ್ತಿ ಸತ್ತು ಎರಡನೇ ಮದುವೆ ಆದೋರ ತುಂಬಾ ಕಂಡೊಂಡಿತ್ತು.ಪೊಲಿಯೋ ಆಗಿ ಕಾಲು ಸರಿ ಇಲ್ಲದ್ದ ಮಕ್ಕೊ ಎಷ್ಟಿತ್ತಿದ್ದವು?
ಹೀಂಗೆ ಒಳುದ ಮಗು ದೊಡ್ಡ ಆಗಿ ಮದುವೆ ಅಪ್ಪಗ ಸರಿಯಾದ ಕೂಸು ನೋಡಿ ಮದುವೆ ಆಗಿಯೊಂಡಿತ್ತಲ್ಲದೊ?ಮದುವೆ ಅಪ್ಪಗಳೂ ಕೂಸು ಮಾಣಿಯ ಕುಟುಂಬದ ಆರೊಗ್ಯ ಕೂಡಾ ಹೇಂಗಿದ್ದು ಹೇಳಿ ನೋಡಿಯೇ ಆಗಿಯೊಂಡಿದ್ದದು.ಇದರಿಂದಾಗಿ ಸಂತಾನ ಒಳ್ಳೆದಾಗಿಯೊಂಡಿತ್ತು.
ಆ ಕಾಲಲ್ಲಿ ಹೆಚ್ಚಿನವು ಕೃಷಿ ಮಾಡಿ ಬದುಕ್ಕಿಯೊಂಡಿತ್ತಿದ್ದವು.ಅವಕ್ಕೆ ಬೇಕಾದ ಅಕ್ಕಿ,ತರಕಾರಿ ಮನೆಲೇ ಆಗಿಯೊಂಡಿತ್ತು.ಹಾಲು ಪ್ಲೇಸ್ಟಿಕ್ ತೊಟ್ಟೆಲಿ ಅಲ್ಲ,ಮನೆಲಿ ದನ ಕರದು ಹಾಲೋ ಮಜ್ಜಿಗೆಯೋ ಮಾಡಿ ಉಪಯೋಗ ಮಾಡಿಯೊಂಡಿತ್ತಿದ್ದವು.
ಉದಿಯಪ್ಪಾಗ ಆಳುಗಳೊಟ್ಟಿಂಗೆ ತೊಟಕ್ಕೋ,ಗೆದ್ದೆಗೋ ಹೋಗಿ ಗೈಕ್ಕೊಂಡಿತ್ತಿದ್ದವು.ಹಳ್ಳಿಲಿ ಈಗಾಣ ಹಾಂಗೆ ಕೂಪಲೆ ಕುರ್ಶಿ ಇಲ್ಲೆ,ಮನಗೆ ನೆಂಟ್ರು ಬಂದರೆ ಹಸೆ ಹಾಕಿ ಕೂಪಲೆ ಹೇಳುದದಾ.ಹಾಂಗಾಗಿ ಇಂದು ಬೈಪ್ಪಣೆ ಬೇಡದ್ದದಪ್ಪು.ಆ ತಲೆಮಾರಿನವು(ಬದ್ಕಿ ಒಳುದವು)ಆರೋಗ್ಯಲ್ಲಿ ಗಟ್ಟಿ ಇದ್ದದು ಅಪ್ಪು.
ಆ ಕ್ರಮಂಗೊ ಒಳ್ಳೆದೇ.ಹಾಂಗೆ ಹೇಳಿ ಈಗ ನಾವು ಮಕ್ಕಳ ಆರೋಗ್ಯ ಸರಿಯಾಗಿಪ್ಪಲೆ ಬೇಕಾಗಿ ಕಾಯಿಲೆ ಬಾರದ್ದ ಹಾಂಗೆ ಮದ್ದು,ಇಂಜಕ್ಶನ್ ಕೊಡುಸುದು ತಪ್ಪು ಹೇಳಿರೆ ಒಪ್ಪುವ ವಿಷಯ ಅಲ್ಲನ್ನೆ.ಪೇಟೆಲಿ ಸಣ್ಣ ಮನೆ ಮಾಡಿ ನೆಲಲ್ಲೇ ಕೂದು ಉಂಬೊ ಹೇಳಿರೆ ಅಪ್ಪ ಜೆಂಬಾರ ಅಲ್ಲನ್ನೆ.
ಈ ಮದ್ದುಗಳ ಪ್ರಭಾವಂದಾಗಿ ಆರೋಗ್ಯಲ್ಲಿ ಬದುಕ್ಕುವ ಸಾಮರ್ಥ್ಯ ಇಲ್ಲದ್ದ ಮಗು ದೊಡ್ಡಪ್ಪಾಗ ಗಟ್ಟಿಯಾಗಿರೇಕು ಹೇಳಿ ನಿರೀಕ್ಷೆ ಸರಿಯಲ್ಲನ್ನೆ.ರಾಸಾಯನಿಕವೇ ಉಪಯೋಗ ಅಪ್ಪ ಹಣ್ಣು ತರಕಾರಿ ತಿಂದು ಎಷ್ಟು ಗಟ್ಟಿಯಾಗಿಪ್ಪಲೆಡಿಗಣ್ಣೋ?
.ಹಾಂಗೆ ಹೇಳಿ ನಾವು ಇಂದು ಬದಲಾದ ಪರಿಸ್ತಿತಿಲಿ ಅನಿವಾರ್ಯವಾಗಿ ಗುಣ ಮಟ್ಟ ಇಲ್ಲದ್ದ ಆಹಾರ  
ತಿನ್ನೆಕ್ಕಾವುತ್ತು.ಜನಸಂಖ್ಯೆ ಹೆಚ್ಚಾದ ಕಾರಣ ನಮ್ಮ ದೇಶಲ್ಲಿ ಊಟ ಇಲ್ಲದ್ದ ಪರಿಸ್ತಿತಿ ಇದ್ದದು ಅಪ್ಪಚ್ಚಿಗೋ ಮಾವಂಗೋ ನೆಂಪಿಕ್ಕು.ಅದರೊಟ್ಟಿಂಗೆ ರಾಜಕೀಯ,ಅಂತರ್ರಾಷ್ಟ್ರೀಯ ಒತ್ತಡಂಗೊ ನಮ್ಮಲ್ಲಿ ರಾಸಾಯನಿಕ ಉಪಯೋಗ ಮಾಡಿ ಕೃಷಿ ಮಾಡುವಲ್ಲಿಂಗೆ ನಮ್ಮ ತಂದಿಕ್ಕು.ಅದು ಒಳ್ಳೆದೋ ಹಾಳೋ,ನಮ್ಮ ಮಕ್ಕೊ ನಮ್ಮ ಕಣ್ಣೆದುರು ಬದುಕ್ಕಿ ಒಳಿವದು ನೂರಕ್ಕೆ ನೂರು ಸತ್ಯ. ಇಂದು ಹುಟ್ಟಿದ ಮಕ್ಕೊ ಒಂದು ವರ್ಷದೊಳ ಸಾಯುವದು ಕಮ್ಮಿ ಆಗಿ ೧೦೦೦ ಹೆರಿಗೆಲಿ ೨೫ರ ವರೆಗೆ ಇಳುದ್ದು ಕಾಣ್ತು.ಹುಟ್ಟಿ ಮಗು ಸಾಯುವದು ಇಲ್ಲೆ ಹೇಳುವ ಮಟ್ಟಕ್ಕೆ,ಹೆರಿಗೆಲಿ ಕೂಸುಗೊ ಪ್ರಾಣ ಕಳಕ್ಕೊಂಬದು ತೀರಾ ಕಮ್ಮಿ ಆಯಿದು.(ಸಿಸೇರಿಅನ್ ಹೆರಿಗೆಯ ವಿರೋಧ ಮಾಡೆಡಿ).ಇಂದು ನಿಂಗೊ ಎಷ್ಟು ಎರಡ್ಣೇ ಮದುವೆ,ಗೆಂಡ/ಹೆಂಡತ್ತಿ ಸತ್ತು,ಅಪ್ಪದು ನೋಡಿದ್ದಿ?ಡೈವೋರ್ಸ್ ಆದರೆ ಎನಗರಡಿಯ.
ಇದು ತಾರ್ಕಿಕ ಅಂತ್ಯ ಕಾಂಬ ವಿಷಯ ಅಲ್ಲ.ಆ ಕಾಲಕ್ಕೆ ಅದು ಸುಖ,ಈ ಕಾಲಕ್ಕೆ ಇದು ಸುಖ.ಎರಡರ ಮಧ್ಯೆ ಹೊಂದಾಣಿಕೆ ಮಾಡಿಯೊಂಬದು ನಮ್ಮ ಬುದ್ಧಿವಂತಿಕೆಗೆ ಬಿಟ್ಟ ವಿಚಾರ.

No comments:

Post a Comment